ಸೆಕ್ಸ್ ಸುಖ ನೀಡಲು ನಿರಾಕರಿಸಿದ 20 ವರ್ಷದ ಯುವತಿಯೊಬ್ಬಳನ್ನು ಆರೋಪಿಯೊಬ್ಬ ಗಂಟಲು ಕತ್ತರಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎರಡು ಮಕ್ಕಳ ತಂದೆಯಾದ ಆರೋಪಿ ನರೇಶ್, ಯುವತಿಯೊಂದಿಗೆ ಸೆಕ್ಸ್ ಸಂಬಂಧ ಹೊಂದಲು ಬಯಸಿದ್ದ. ಆದರೆ, ಆಕೆ ನೇರವಾಗಿ ನಿರಾಕರಿಸಿದ್ದರಿಂದ ಒಳಗೊಳಗೆ ಕುದಿಯುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನರೇಶ್ ಮತ್ತು ಯುವತಿ ಒಂದೇ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.