ಚೆನ್ನೈನಲ್ಲಿ ಸಿನಿಮಾ ನಟರು ಮತ್ತು ರಾಜಕಾರಣಿಗಳೆಂದರೆ ಹುಚ್ಚು ಅಭಿಮಾನ. ಅವರಿಗಾಗಿ ಪ್ರಾಣ ಕೊಡಲು ಹಿಂದೇಟು ಹಾಕುವುದಿಲ್ಲ. ಮಾಜಿ ಸಿಎಂ ಜಯಲಲಿತಾ ಸಾವನ್ನಪ್ಪಿದಾಗ 500ಕ್ಕಿಂತ ಹೆಚ್ಚು ಜನರು ಆತ್ಮಹತ್ಯೆ, ಹೃದಯಾಘಾತದಿಂದ ದುರ್ಮರಣವನ್ನಿಪ್ಪಿದ್ದರು ಎನ್ನಲಾಗುತ್ತಿದೆ. ಮತ್ತೀಗ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಕ್ಕೆ ನೊಂದು ಅವರ ಅಭಿಮಾನಿಯೋರ್ವ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾಂಚಿಪುರಮ್ ನಿವಾಸಿಯಾದ 37 ವರ್ಷದ ಮೂಸಾ ಮೃತ ವ್ಯಕ್ತಿಯಾಗಿದ್ದಾನೆ. ಬೆಂಕಿ ಹಚ್ಚಿಕೊಂಡು ಗಂಭೀರ ಸ್ಥಿತಿಯಲ್ಲಿ ಕಿಲ್ಪೌಕ್ ಸರ್ಕಾರಿ