ನವದೆಹಲಿ: ಮಾಜಿ ಪ್ರಧಾನಿ, ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ ಅಪಘಾತಕ್ಕೀಡಾಗಿರುವುದಾಗಿ ವರದಿಯಾಗಿದೆ.ಬೆಳಗ್ಗೆ ಸಂಸತ್ ಭವನಕ್ಕೆ ತೆರಳುವಾಗ ದೆಹಲಿಯ ಅಕ್ಬರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಮಾಜಿ ಪ್ರಧಾನಿ ಹಾಗೂ ಅವರ ಜತೆಗಿದ್ದವರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.ಮನಮೋಹನ್ ಸಿಂಗ್ ಚಲಿಸುತ್ತಿದ್ದ ಕಾರಿನ ಮುಂದೆ ಸಾಗುತ್ತಿದ್ದ ಬೆಂಗಾವಲು ಪಡೆ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ ಯಾವುದೇ ಅಪಾಯವಾಗಿಲ್ಲ.ಇದನ್ನೂ