ಹಾಸನ-ಯಶವಂತಪುರ ರೈಲು ಸಂಚಾರ ಆರಂಭವಾದ ಬಳಿಕ ಬೆಂಗಳೂರು ಮತ್ತು ಮಂಗಳೂರು ನೇರ ರೈಲು ಸಂಚಾರಕ್ಕೆ ಕಾಲ ಕೂಡಿ ಬಂದಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಸಂಚರಿಸುವ ಕುಡ್ಲ ಎಕ್ಸ್`ಪ್ರೆಸ್`ಗೆ ನಾಳೆ ರೈಲ್ವೆ ಸಚಿವ ಸುರೇಶ್ ಪ್ರಭು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ನೆಲಮಂಗಲ-ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರಿಂದ ಮಂಗಳೂರಿಗೆ(ಬೆಳಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು ಸಂಜೆ 5.45ಕ್ಕೆ ಮಂಗಳೂರು ತಲುಪಲಿದೆ)