ನಗದು ಹಣದ ಕೊರತೆಯಿರುವುದರಿಂದ ಗ್ರಾಹಕರಿಗೆ ತಲಾ 24 ಸಾವಿರ ರೂಪಾಯಿ ಹಣ ನೀಡಲು ಬ್ಯಾಂಕ್ ಅಧಿಕಾರಿಗಳು ತಿರಸ್ಕರಿಸಿದ್ದರಿಂದ, ಆಕ್ರೋಶಗೊಂಡ ಗ್ರಾಹಕರು ಎರಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ಗಳನ್ನು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ. ಆಕ್ರೋಶಗೊಂಡ ಗ್ರಾಹಕರು ಹಿಂಸಾಚಾರದಲ್ಲಿ ತೊಡಗಿ ಬ್ಯಾಂಕ್ನೊಳಗೆ ನುಗ್ಗಿ ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಒಬ್ಬ ಪೊಲೀಸ್ ಪೇದೆಗೆ ಗಾಯಗಳಾಗಿವೆ. ಆದರೆ, ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನೋಟು ನಿಷೇಧದ ನಂತರ ಒಬ್ಬ