ನವದೆಹಲಿ : ಭಾರತೀಯ ಸೇನಾ ಮುಖ್ಯಸ್ಱರ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಕಾರ್ಪ್ ಎಂಜಿನೀಯರ್ ನೇಮಕ ಮಾಡಲಾಗಿದೆ. ಹೌದು ಹಾಲಿ ಸೇನಾ ಮುಖ್ಯಸ್ಥ ಎಂಎಂ ನರವಾನೆ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನಲೆಯಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ನೇಮಕಗೊಂಡಿದ್ದಾರೆ.ಕೇಂದ್ರ ರಕ್ಷಣಾ ಸಚಿವಾಲಯ ಮನೋಜ್ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ಮನೋಜ್ ಮುಕುಂದ್ ನರವಾನೆ ಅವರ 28 ತಿಂಗಳ ಅಧಿಕಾರವದಿ ಎಪ್ರಿಲ್ 30ಕ್ಕೆ ಅಂತ್ಯವಾಗುತ್ತಿದೆ.