ಮುಂಬೈ : ನಗರದಾದ್ಯಂತ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತಾತ್ಕಾಲಿಕವಾಗಿ ಮದುವೆ ನೋಂದಣಿ ಸೇವೆಯನ್ನು ಸ್ಥಗಿತಗೊಳಿಸಿದೆ.ಮುಂಬೈನಲ್ಲಿ ಪ್ರಸ್ತುತ ಕೋವಿಡ್-19 ಪರಿಸ್ಥಿತಿಯಿಂದಾಗಿ ಮದುವೆ ನೋಂದಣಿ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪ್ರಕರಣಗಳು ಕಡಿಮೆಯಾದ ಮೇಲೆ ಶೀಘ್ರದಲ್ಲೇ ಸೇವೆಯನ್ನು ಮರುಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ನಡೆಸಲಾದ 57,534 ಪರೀಕ್ಷೆಗಳಲ್ಲಿ 7,895 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬಿಎಂಸಿ ಬುಲೆಟಿನ್ ಪ್ರಕಾರ, ಮುಂಬೈನಲ್ಲಿ ಒಟ್ಟು ಸೋಂಕಿನ