ಹಿರಿಯರು ಮಾಡಿದ ಬಲವಂತದಿಂದ ಅತ್ತಿಗೆಯನ್ನು ಮದುವೆಯಾಗಿದ್ದ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರ ರಾಜ್ಯದ ಗಯಾ ಜಿಲ್ಲೆಯ ವಿನೋಭಾ ನಗರದ ಮಹದೇವ್ ಕುಮಾರ್ ದಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. 9ನೇ ತರಗತಿ ಓದುತ್ತಿದ್ದ ಬಾಲಕನಿಗೆ ತನಗಿಂತ 10 ವರ್ಷ ದೊಡ್ಡವರಾದ ಅತ್ತಿಗೆ ರೂಬಿ ದೇವಿಯೊಂದಿಗೆ ಮದುವೆ ಮಾಡಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಬಾಲಕನ ಅಣ್ಣ ಸಂತೋಷ್