ಭೋಪಾಲ್: ವಿವಾಹಿತನೊಬ್ಬ 16 ವರ್ಷದ ಅಪ್ರಾಪ್ತೆಯನ್ನು ಹಿಂಬಾಲಿಸಿ ಆಕೆಯನ್ನು ಮಾನಭಂಗ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಕಾರ್ಪೆಂಟರ್ ವೃತ್ತಿಯಲ್ಲಿರುವ ಆರೋಪಿ ಕಳೆದ ಕೆಲವು ದಿನಗಳಿಂದ ಆಕೆಯನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ. ಆದರೆ ಯಾವುದೋ ಕೆಲಸದ ಮೇಲೆ ಹೊರಗೆ ಹೋಗಿದ್ದ ಬಾಲಕಿ ಮನೆಗೆ ಬರುವಾಗ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಶೀಲಕೆಡಿಸಿದ್ದಾನೆ. ಘಟನೆ ಬಗ್ಗೆ ಬಾಲಕಿ ಮನೆಯಲ್ಲಿ ಬಾಯ್ಬಿಟ್ಟಿರಲಿಲ್ಲ. ಆದರೆ ಆಕೆಯ ವರ್ತನೆಯಲ್ಲಿ ಬದಲಾವಣೆ ಗಮನಿಸಿದ ಪೋಷಕರು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.