ಮದುವೆಯಾಗಿ ಪತಿಯೊಂದಿಗೆ ಸುಂದರವಾದ ಸಂಸಾರ ಮಾಡುವ ಕೋಟಿ ಕೋಟಿ ಕನಸುಗಳೊಂದಿಗೆ ವಿವಾಹವಾಗಿದ್ದಳು. ಪತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕು ಎನ್ನುವುದೇ ಆಕೆಯ ಸುಂದರ ಆಶಯವಾಗಿತ್ತು. ಆದರೆ, ವಿವಾಹವಾದ ಪತಿ ನಪುಂಸಕ ಎಂದು ತಿಳಿದ ನಂತರ ಪಾತಾಳಕ್ಕೆ ಕುಸಿದಿದ್ದಳು. ನನ್ನ ನಪುಂಸಕತನವನ್ನು ಯಾರ ಮುಂದೆಯೂ ಹೇಳಬೇಡ ಎಂದು ಪತಿ ಮನವಿ ಮಾಡಿದ್ದರಿಂದ ನೋವನ್ನು ಮನಸ್ಸಿನಲ್ಲಿ ಅದುಮಿಟ್ಟುಕೊಂಡಿದ್ದಳು. ಆದರೆ, ಪತಿ ಚಿತ್ರಹಿಂಸೆ ನೀಡುತ್ತಿರುವಾಗ ಮಾತ್ರ ಆಕೆಗೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಮುಂದೆ ಪತಿಯ