ನಮ್ಮ ಒಬ್ಬ ಯೋಧನ ರುಂಡಕ್ಕೆ ಪ್ರತಿಯಾಗಿ 10 ಪಾಕಿಸ್ತಾನ ಯೋಧರ ರುಂಡ ಕಡಿದು ತರುತ್ತೇವೆಂದು ಈ ಹಿಂದೆ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೂ ಆ ಭರವಸೆ ಈಡೇರಿಲ್ಲ. ಸರ್ಕಾರದ ಆ ಭರವಸೆ ಏನಾಯ್ತು...? ಇದು ಪಾಕ್ ಯೋಧರಿಂದ ಶಿರಚ್ಛೇಧನಕ್ಕೊಳಗಾದ ಭಾರತೀಯ ಯೋಧರೊಬ್ಬರ ತಾಯಿಯ ಸಂಕಟದ ಪ್ರಶ್ನೆ. ಹೌದು. 2013 ರಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರತರಾಗಿದ್ದ ಲ್ಯಾನ್ಸ್ ನಾಯ್ಕ್ ಹೇಮ್ರಾಜ್ ಅವರ ಮೇಲೆ