ಮಾಸ್ಕ್ ಬಳಕೆ ಪ್ರಮಾಣದಲ್ಲಿ ಗಣನೀಯ ಕುಸಿತ

ನವದೆಹಲಿ| Krishnaveni K| Last Modified ಸೋಮವಾರ, 19 ಜುಲೈ 2021 (12:05 IST)
ನವದೆಹಲಿ: ಕೊರೋನಾ ಎರಡನೇ ಅಲೆ ಮುಗಿಯುತ್ತಿದ್ದಂತೇ ಹಲವು ರಾಜ್ಯಗಳಲ್ಲಿ ಅನ್ ಲಾಕ್ ಜಾರಿಯಾಗುತ್ತಿದ್ದಂತೇ ಮಾಸ್ಕ್ ಬಳಕೆ ಪ್ರಮಾಣದಲ್ಲೂ ಗಣನೀಯವಾಗಿ ಕುಸಿತ ಕಂಡುಬಂದಿದೆ.

 
ಕೇಂದ್ರ ಇಲಾಖೆಯ ಪ್ರಕಾರ ಶೇ.74 ರಷ್ಟು ಕುಸಿತ ಕಂಡುಬಂದಿದೆ ಎನ್ನಲಾಗಿದೆ. ದೇಶ ಮೂರನೇ ಅಲೆಯ ಹೊಸ್ತಿಲಲ್ಲಿರುವಾಗ ಇದು ಅತ್ಯಂತ ಕಳವಳಕಾರಿ ಸಂಗತಿ.
 
ಮೂರನೇ ಅಲೆ ಅಪಾಯಕಾರಿಯಾಗದಂತೆ ತಡೆಯಬೇಕಾದರೆ ಮತ್ತೆ ಸಾಮಾಜಿಕ ಸುರಕ್ಷತೆಗಳ ಬಗ್ಗೆ ನಾವು ಗಮನಕೊಡಲೇಬೇಕು. ಹೀಗಾಗಿ ಮಾಸ್ಕ್ ಬಳಕೆಯನ್ನು ದೈನಂದಿನ ಬದುಕಿನ ಭಾಗವಾಗಿಸುವ ಬಗ್ಗೆ ನಾವು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.
ಇದರಲ್ಲಿ ಇನ್ನಷ್ಟು ಓದಿ :