ಸ್ಥಳೀಯ ಪತ್ರಿಕೆಗಳಲ್ಲಿ ಸರಕಾರಿ ಉದ್ಯೋಗದ ಬಗ್ಗೆ ನಕಲಿ ಜಾಹೀರಾತು ನೀಡಿದ ವ್ಯಕ್ತಿಯೊಬ್ಬ ಜನರಿಂದ ಹಣ ಪಡೆದು ವಂಚಿಸಿರುವುದು ಬಯಲಾಗಿದೆ. ಗುಜರಾತ್ನಲ್ಲಿ ಸರಕಾರಿ ಉದ್ಯೋಗದ ಜಾಹೀರಾತು ಹೋಲುವಂತೆ ನಕಲಿ ಉದ್ಯೋಗ ಜಾಹೀರಾತು ನೀಡಿ ಜನರಿಂದ ಶುಲ್ಕವಾಗಿ ಹಣ ಪಡೆದುಕೊಳ್ಳುತ್ತಿದ್ದ ಆರೋಪಿ ಸಂದೀಪ್ ಪಾಂಡ್ಯ ಎಂಬಾತವನ್ನು ಪೊಲೀಸರು ಬಂಧನ ಮಾಡಿದ್ದಾರೆ.ಸೈಬರ್ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧನ ಮಾಡಿದ್ದು, ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 419 ಮತ್ತು 420 (ಮೋಸ), ಮತ್ತು