ತಿರುವನಂತಪುರಂ : ಮಾತಾ ಅಮೃತಾನಂದಮಯಿ ಅವರ ತಾಯಿ ದಮಯಂತಿ (97) ಅವರು ನಿಧನರಾಗಿದ್ದಾರೆ.ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ಕೊಲ್ಲಂನ ಅಮೃತಪುರಿ ಆಶ್ರಮದಲ್ಲಿ ದಮಯಂತಿ ಅವರು ಕೊನೆಯುಸಿರೆಳೆದಿದ್ದು, ಮಂಗಳವಾರ ಸಂಜೆ 4 ಗಂಟೆಗೆ ಅಮೃತಪುರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ದಮಯಂತಿ ಅವರು ಕೊಲ್ಲಂನ ಅಮೃತಪುರಿ ಎಡಮ್ಮನ್ನೆಲ್ನ ದಿವಂಗತ ಸುಗುಣಂದನ್ ಅವರ ಪತ್ನಿಯಾಗಿದ್ದು, ಇದೀಗ ಕಸ್ತೂರಿ ಭಾಯಿ, ಸುಭಗನ್, ಸುಗುಣಮ್ಮ, ಸಜಿನಿ, ಸುರೇಶ್ ಕುಮಾರ್, ಸತೀಶ್ ಕುಮಾರ್ ಮತ್ತು ಸುಧೀರ್ ಕುಮಾರ್