ಕಳೆದ ವಾರ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಲಿತರ ಮನೆಯಲ್ಲಿ ಊಟ ಮಾಡಿದ್ದರು. ಈ ಕುರಿತು ವಿರೋಧ ಪಕ್ಷಗಳ ಟೀಕಾಪ್ರಹಾರ ಮುಂದುವರೆದಿದ್ದು ಉತ್ತರ ಪ್ರದೇಶ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಮಿತ್ ಶಾ ದಲಿತ ಮನೆಯಲ್ಲಿ ಊಟ ಮಾಡಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ ಬೆನ್ನಲ್ಲೇ ಬಿಎಸ್ಪಿ ನಾಯಕಿ ಮಾಯಾವತಿ ಶಾ ದಲಿತರ ಮನೆಯಲ್ಲಿ ಶಾ ಅವರಿಗೆ ಅಡುಗೆ ಮಾಡಿದವರು ಯಾರೆಂಬ ಹುಡುಕಾಟದಲ್ಲಿದ್ದಾರೆ.