ಪವಿತ್ರ ಹಜ್ ವೇಳೆ ಮೆಕ್ಕಾದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ಸತ್ತವರಲ್ಲಿ 14 ಭಾರತೀಯರು ಸೇರಿದ್ದಾರ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶುಕ್ರವಾರ ತಿಳಿಸಿದ್ದಾರೆ.ಜೆಡ್ಡಾದ ನಮ್ಮ ಕೌನ್ಸಲ್ ಜನರಲ್ ಮೆಕ್ಕಾ ಕಾಲ್ತುಳಿತದ ಘಟನೆಯಲ್ಲಿ 14 ಜನ ಭಾರತೀಯರು ಸತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ. 13 ಭಾರತೀಯರು ಗಾಯಗಳಿಂದಆಸ್ಪತ್ರೆಗೆ ಸೇರಿದ್ದಾರೆ ಎಂದು ಪ್ರಸಕ್ತ ಅಮೆರಿಕದಲ್ಲಿರುವ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಸೌದಿ ಅಧಿಕಾರಿಗಳು ದೃಢಪಡಿಸಿದ ಬಳಿಕ ನಿಖರ ಸಂಖ್ಯೆ