ಚಾಕು ತೋರಿಸಿ ಆರು ತಿಂಗಳ ಗರ್ಭಿಣಿಯ ಮೇಲೆ ಮಾನಭಂಗ

ಮಹಾರಾಜ್ ಗಂಜ್| pavithra| Last Modified ಗುರುವಾರ, 8 ಏಪ್ರಿಲ್ 2021 (08:04 IST)
ಮಹಾರಾಜ್ ಗಂಜ್ : ಚಾಕು ತೋರಿಸಿ ಆರು ತಿಂಗಳ ಗರ್ಭಿಣಿಯ ಮೇಲೆ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದ ಮಹಾರಾಜ್ ಗಂಜ್  ಜಿಲ್ಲೆಯ ಪನಿಯಾರಾ ಗ್ರಾಮದಲ್ಲಿ ನಡೆದಿದೆ.

ನೆರೆಮನೆಯಾತ ಗೋಡೆ ಹಾರಿ ಬಂದು ರಾತ್ರಿ ಮನೆಯಲ್ಲಿ ರೂಂನಲ್ಲಿ ಒಬ್ಬಳೆ ಮಲಗಿದ್ದ ಗರ್ಭಿಣಿಯ ಬಾಯಿ ಮುಚ್ಚಿ ಚಾಕು ತೋರಿಸಿ ಹೆದರಿಸಿ ಮಾನಭಂಗ ಎಸಗಿದ್ದಾನೆ.  ಆಕೆ ನೋವಿನಿಂದ ಕಿರುಚಿಕೊಂಡಾಗ ಪಕ್ಕದ ರೂಂನಲ್ಲಿದ್ದ ಅತ್ತೆ ಬಂದು ಆರೋಪಿಯನ್ನು ಹಿಡಿದಿದ್ದಾಳೆ. ಬಳಿಕ ನೆರೆಹೊರೆಯವರು ಬರುವುದರೊಳಗೆ ಆತ ತಪ್ಪಿಸಿಕೊಂಡಿದ್ದಾನೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :