ಡೇಟಿಂಗ್ ಆ್ಯಪ್ ನಲ್ಲಿ ಪರಿಚಯನಾದವ ಭೇಟಿ ಮಾಡಲು ಕರೆದು ಹೀಗಾ ಮಾಡೋದು

ಪುಣೆ| pavithra| Last Modified ಬುಧವಾರ, 30 ಡಿಸೆಂಬರ್ 2020 (06:52 IST)
ಪುಣೆ :  ಮಹಿಳೆಗೆ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯನಾದವ  26 ವರ್ಷದ ವ್ಯಕ್ತಿ ಆಕೆಗೆ ಮದ್ಯಪಾನ ಮಾಡಿಸಿ ಮಾನಭಂಗ ಎಸಗಿದ ಘಟನೆ ಪುಣೆಯಲ್ಲಿ ನಡೆದಿದೆ.

ಮಹಿಳೆಗೆ  ಡೇಟಿಂಗ್ ಆ್ಯಪ್ ನಲ್ಲಿ ಆರೋಪಿ ಪರಿಚಯವಾಗಿ ಬಳಿಕ ಇಬ್ಬರು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಆ ವೇಳೆ ಭೇಟಿಯಾಗಲು ಬಂದ ಮಹಿಳೆಯನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ಸೇವಿಸುವಂತೆ ಒತ್ತಾಯಿಸಿ ಬಳಿಕ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ. ಇದಕ್ಕೆ ಮಹಿಳೆ ವಿರೋಧಿಸಿದಾಗ ಆಕೆಯ  ಕೈಕಾಲಿಗೆ ಬೂಟುಗಳಿಂದ ಹೊಡೆದು ಮಾನಭಂಗ ಎಸಗಿದ್ದಾನೆ.

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಅಡಿಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :