ವಿಧವೆಯ ಮೇಲೆ ಮಾನಭಂಗ ಎಸಗಿ ಆಕೆಯ ಖಾಸಗಿ ಭಾಗವನ್ನು ಘಾಸಿಗೊಳಿಸದ ಕಾಮುಕರು

ಜಾರ್ಖಂಡ್| pavithra| Last Modified ಸೋಮವಾರ, 11 ಜನವರಿ 2021 (07:31 IST)
ಜಾರ್ಖಂಡ್ : 50 ವರ್ಷದ ವಿಧವೆಯ ಮೇಲೆ ಮಾನಭಂಗ ಎಸಗಿ ಆಕೆಯ ಖಾಸಗಿ ಭಾಗಕ್ಕೆ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ಜಾರ್ಖಂಡ್ ನ ಹಂಟರ್ ಗಂಜ್ ಪ್ರದೇಶದಲ್ಲಿ ನಡೆದಿದೆ.

ಮಹಿಳೆ ಮೂತ್ರ ವಿಸರ್ಜನೆ ಹೋಗಿದ್ದಾಗ ಮೂವರು ಕಾಮುಕರು ಆಕೆಯನ್ನು ಎಳೆದುಕೊಂಡು ಹೋಗಿ ಮಾನಭಂಗ ಎಸಗಿದ್ದಲ್ಲದೇ ಆಕೆಯ ಖಾಸಗಿ ಭಾಗಕ್ಕೆ ಸ್ಟೀಲ್ ರಾಡ್ ಗಳನ್ನು ತುರುಕಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ.

ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರನೇಯವನಿಗಾಗಿ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :