ಮದುವೆ ನೆಪದಲ್ಲಿ ಮಹಿಳೆಯ ಮೇಲೆ 8 ವರ್ಷಗಳಿಂದ ಮಾನಭಂಗ ಎಸಗಿದ ಜಮೀನುದಾರ

ಭೋಪಾಲ್| pavithra| Last Modified ಬುಧವಾರ, 7 ಏಪ್ರಿಲ್ 2021 (07:50 IST)
ಭೋಪಾಲ್ : ಪತಿಯಿಂದ ಡಿವೋರ್ಸ್ ಪಡೆದಿದ್ದ ಮಹಿಳೆಯೊಬ್ಬಳಿಗೆ ಮದುವೆಯಾಗುವ ಭರವಸೆ ನೀಡಿ ಜಮೀನುದಾರನೊಬ್ಬ 8 ವರ್ಷಗಳ ಕಾಲ ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

31 ವರ್ಷದ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಪತಿಯಿಂದ ದೂರವಾದ ಬಳಿಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆದರೆ ಜಮೀನುದಾರನೊಬ್ಬ ಮದುವೆಯಾಗುವ ಭರವಸೆ ನೀಡಿ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಹೀಗೆ 8 ವರ್ಷಗಳ ಕಾಲ ಇವರ ಸಂಬಂಧ ಮುಂದುವರಿದಿದೆ.

ಆದರೆ ಇತ್ತೀಚೆಗೆ ಜಮೀನ್ ದಾರ ಮದುವೆಯನ್ನು ನಿರಾಕರಿಸಿದ ಹಿನ್ನಲೆಯಲ್ಲಿ  ಮಹಿಳೆ ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.  ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜಮೀನುದಾರನನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :