ಗುರುಗ್ರಾಮ : 24 ವರ್ಷದ ಮಹಿಳೆಯೊಬ್ಬಳನ್ನು ಐವರು ಪುರುಷರು ಅಪಹರಿಸಿ ಸಾಮೂಹಿಕ ಮಾನಭಂಗ ಎಸಗಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಸಂತ್ರಸ್ತೆ ಮಾಲ್ ವೊಂದರಲ್ಲಿ ಸಂಜೆ 7ರಿಂದ ಬೆಳಿಗ್ಗೆ 3 ಗಂಟೆಯ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದಳು. 3 ಗಂಟೆಯ ಬಳಿಕ ಮನೆಗೆ ಹೋಗುತ್ತಿದ್ದಾಗ ಡ್ರಾಪ್ ಕೊಡುವುದಾಗಿ ಕ್ಯಾಬ್ ಹತ್ತಿಸಿಕೊಂಡ ಕ್ಯಾಬ್ ಚಾಲಕ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ ಆಕೆಯನ್ನು ಅಪಹರಿಸಿ ಜಮೀನೊಂದಕ್ಕೆ ಕರೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾರೆ,