ಸಂಬಂಧ ಹೊಂದಿದ್ದ ಮಹಿಳೆಯ ಮಗಳ ಮೇಲೆ ಮಾನಭಂಗ ಎಸಗಿದ ಕಾಮುಕ

ವಿಲ್ಲುಪುರಂ| pavithra| Last Modified ಗುರುವಾರ, 7 ಜನವರಿ 2021 (07:24 IST)
ವಿಲ್ಲುಪುರಂ : 40 ವರ್ಷದ ವ್ಯಕ್ತಿಯೊಬ್ಬ ತಾನು ಸಂಬಂಧ ಹೊಂದಿದ್ದ ಮಹಿಳೆಯ 14 ವರ್ಷದ ಮಗಳ  ಮೇಲೆ ಪದೇ ಪದೇ ಮಾನಭಂಗ ಎಸಗಿದ ಘಟನೆ ತಮಿಳುನಾಡಿನ ವಿಲ್ಲುಪುರಂ  ಜಿಲ್ಲೆಯ ಕೊಟ್ಟಕುಪ್ಪಂನಲ್ಲಿ ನಡೆದಿದೆ.

ಆರೋಪಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಆದರೆ ಆಕೆಯ ಪತಿ ನಿಧನರಾದ ಹಿನ್ನಲೆಯಲ್ಲಿ ತನ್ನ ಮಗಳ ಜೊತೆ ಆರೋಪಿಯ ಮನೆಯಲ್ಲಿ ವಾಸಿಸತೊಡಗಿದ್ದಾಳೆ. ಆದರೆ ಆತ ತಾಯಿ ಇಲ್ಲದ ವೇಳೆ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ವಿಚಾರ ಆಕೆ ತನ್ನ ತಾಯಿ ಬಳಿ ತಿಳಿಸಿದ ಹಿನ್ನಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :