ಮಧ್ಯಪ್ರದೇಶ : ವಲಸೆ ಕಾರ್ಮಿಕನ 5 ವರ್ಷದ ಮಗಳ ಮೇಲೆ ಆತನ 18 ವರ್ಷದ ಸಹಾಯಕನೊಬ್ಬ ಮಾನಭಂಗ ಎಸಗಿದ ಘಟನೆ ಮೊರ್ಬಿ ಪಟ್ಟಣದಲ್ಲಿ ನಡೆದಿದೆ. ಆರೋಪಿ ರಾತ್ರಿ8 ಗಂಟೆಗೆ ಬಾಲಕಿಯನ್ನು ಅಪಹರಿಸಿ ಮೊರ್ಬಿ ಪಟ್ಟಣದ ಪೂರ್ವ ಭಾಗದಲ್ಲಿರುವ ದೇವಾಲಯದ ಹಿಂಭಾಗದ ನಿರ್ಜನ ಸ್ಥಳಕ್ಕೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ.ಈ ವಿಚಾರ ತಿಳಿದ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಫಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.