ಮನೆಗೆ ಕರೆದವ ಅಪ್ರಾಪ್ತೆಗೆ ಮಾಡಿದ್ದೇನು ಗೊತ್ತಾ?

ನೋಯ್ಡಾ| pavithra| Last Updated: ಭಾನುವಾರ, 20 ಸೆಪ್ಟಂಬರ್ 2020 (17:57 IST)
ನೋಯ್ಡಾ : ಅಪ್ರಾಪ್ತ ಬಾಲಕಿಯ ಮೇಲೆ ಮಾನಭಂಗ ಎಸಗಿದ 25 ವರ್ಷದ ಯುವಕನನ್ನು ಸೆಕ್ಟರ್ 39 ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸದರ್ಪುರ್ ಗ್ರಾಮದ ನಿವಾಸಿ  ನದೀಮ್ ಎಂದು ಗುರುತಿಸಲಾಗಿದೆ. ಈತ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಾಲಕಿ ನೆರೆಮನೆಯಲ್ಲಿ ವಾಸವಾಗಿದ್ದು, ಇಬ್ಬರು ಪರಿಚಯರಾಗಿದ್ದರು. ಆರೋಪಿ ಬಾಲಕಿಯನ್ನು ಮನೆಗೆ ಕರೆದು ಇಂತಹ ಅತ್ಯಾಚಾರ ಕೃತ್ಯ ಎಸಗಿದ್ದಾನೆ.

ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದಿದ್ದು, ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲಿಸರು ಅತ್ಯಾಚಾರಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :