ಅಹಮದಾಬಾದ್ : ಹದಿಹರೆಯದ ಯುವಕನಿಂದ ಲೈಂಗಿಕ ದೌರ್ಜನ್ಯಕೊಳ್ಳಗಾದ 13ವರ್ಷದ ಹುಡುಗಿಗೆ ಗರ್ಭಪಾತ ಮಾಡಿಸಿದ ಘಟನೆ ಗುಜರಾತ್ ನ ಜಮ್ನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ. ಸಂತ್ರಸ್ತೆಯ ತಂದೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಗ್ರಾಮದ ಹೊರವಲಯದಲ್ಲಿರುವ ಕೃಷಿ ಮೈದಾನದಲ್ಲಿ ಯುವಕ ಹುಡುಗಿಯ ಮೇಲೆ ಮೂರು ಬಾರಿ ಮಾನಭಂಗ ಎಸಗಿದ್ದಾನೆ ಎನ್ನಲಾಗಿದೆ.ಇದರಿಂದ ಹುಡುಗಿ ಗರ್ಭಧರಿಸಿದ್ದು, ಆಕೆಗೆ ಗರ್ಭಪಾತ ಮಾಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ