ರಾಂಚಿ : ಜಾರ್ಖಂಡ್ ನ ಗುಮ್ಲಾ ಜಿಲ್ಲೆಯ ಕೊಲುಟೊಲಿ ಗ್ರಾಮದಲ್ಲಿ ಕಾಮುಕನ ಅಟ್ಟಹಾಸಕ್ಕೆ ಮೂರು ವರ್ಷದ ಅಪ್ರಾಪ್ತೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಬಾಲಕಿ ಮನೆಯ ಮುಂದೆ ಆಟವಾಡುತ್ತಿದ್ದಾಗ ಆಕೆಯ ಪೋಷಕರು ಮಾರುಕಟ್ಟೆಗೆ ತೆರಳಿದ್ದನ್ನು ನೋಡಿದ ಪಕ್ಕದ ಮನೆ ಕಾಮುಕನೋರ್ವ ಆಕೆಯನ್ನ ತನ್ನ ಮನೆಗೆ ಕರೆದ್ಯೊಯ್ದು ಅತ್ಯಾಚಾರ ಎಸಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಾಲಕಿ ಅಲ್ಲಿಯೇ ಸಾವನ್ನಪ್ಪಿದ್ದಾಳೆ. ಬಾಲಕಿಯ ಪೋಷಕರು ರಾತ್ರಿ ಮರಳಿ ಮನೆಗೆ ಬಂದಾಗ ತನ್ನ ಮನೆಯಲ್ಲಿ ಆಕೆ ಮಲಗಿದ್ದಾಗಿ ಹೇಳಿದ್ದಾನೆ.