ಹರಿಯಾಣ : ಹರಿಯಾಣದ ಭಿವಾನಿ ಎಂಬಲ್ಲಿ 16 ವರ್ಷದ ಹುಡುಗಿಯ ಮೇಲೆ 6 ತಿಂಗಳಗಳ ಕಾಲ ಪದೇ ಪದೇ ಮಾನಭಂಗ ಎಸಗಿದ ಹಿನ್ನಲೆಯಲ್ಲಿ ಆಕೆ 2 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಸಂತ್ರಸ್ತೆ ಕಿರಾಣಿ ಅಂಗಡಿಗೆ ಹೋಗುತ್ತಿದ್ದಾಗ ಆಕೆಯ ಮೇಲೆ 7 ಮಂದಿ ಪುರುಷರು ಪದೇ ಪದೇ ಮಾನಭಂಗ ಎಸಗಿ ಯಾರಿಗೂ ತಿಳಿಸದಂತೆ ಕೊಲೆ ಬೆದರಿಕೆ ಹಾಕಿದ್ದಾರೆ.ಆದರೆ ಸಂತ್ರಸ್ತೆಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯದಾಗ ವಿಚಾರ ಬೆಳಕಿಗೆ ಬಂದಿದೆ.