ದೇವಸ್ಥಾನಕ್ಕೆ ಹೋದ ಮಹಿಳೆಯ ಮೇಲೆ ಘೋರ ಕೃತ್ಯ ಎಸಗಿದ ಕಾಮುಕರು

ಉತ್ತರಪ್ರದೇಶ| pavithra| Last Modified ಗುರುವಾರ, 7 ಜನವರಿ 2021 (07:19 IST)
ಉತ್ತರಪ್ರದೇಶ : ದೇವಸ್ಥಾನಕ್ಕೆ ತೆರಳಿದ 50 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಮಾನಭಂಗ ಎಸಗಿ ಕ್ರೂರವಾಗಿ ಕೊಂದ ಘಟನೆ ಉತ್ತರಪ್ರದೇಶದ ಬಾದಾನ್ ಜಿಲ್ಲೆಯ ಉಘೈತಿ ಪ್ರದೇಶದಲ್ಲಿ ನಡೆದಿದೆ.

ಮಹಿಳೆ ಅಂಗನವಾಡಿಯಲ್ಲಿ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಳು ಸಂಜೆ ಪ್ರಾರ್ಥನೆ ಮಾಡಲು ದೇವಸ್ಥಾನಕ್ಕೆ ಹೋಗಿದ್ದಾಳೆ. ಆ ವೇಳೆ ಕಾಮುಕರು ಸೇರಿ ಇಂತಹ ಘೋರ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮಹಿಳೆ ಶವ ಪತ್ತೆಯಾಗಿದ್ದು ಆಕೆಯ ಖಾಸಗಿ ಭಾಗಗಳಲ್ಲಿ ಗಾಯಗಳಾಗಿದ್ದು, ಕಾಲುಗಳು ಮುರಿತಕ್ಕೊಳಗಾಗಿದ್ದವು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟಕ್ಕಾಗಿ ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :