ಇಟಾವಾ : ಮಗಳಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ ತಂದೆಗೆ ಯುವಕ ಮತ್ತು ಆತನ ಕುಟುಂಬದವರು ಸೇರಿ ಹೊಡೆದು ಕೊಲೆ ಮಾಡಿದ ಘಟನೆ ಇಟವಾ ಜಿಲ್ಲೆಯ ಬಿಥೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ಸಾರಿ ಗ್ರಾಮದಲ್ಲಿ ನಡೆದಿದೆ. ಹುಡುಗಿ ಮನೆಯಲ್ಲಿದ್ದ ವೇಳೆ ದಾರಿಯಲ್ಲಿ ಹೋಗುತ್ತಿದ್ದ ಆರೋಪಿ ಆಕೆಗೆ ಕಿರುಕುಳ ನೀಡಿದ್ದಾನೆ. ಹುಡುಗಿ ಈ ಬಗ್ಗೆ ತನ್ನ ತಂದೆಯ ಬಳಿ ಹೇಳಿದ ಹಿನ್ನಲೆಯಲ್ಲಿ ತಂದೆ ಯುವಕನ ಮನೆ ಬಳಿ ಹೋಗಿ ಈ ಬಗ್ಗೆ ವಿಚಾರಿಸಿದ್ದಾರೆ.