ಪಿಲಿಭಿತ್ : ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ್ದಕ್ಕೆ ಯುವಕರಿಬ್ಬರು ಸೇರಿ 16ವರ್ಷದ ಹುಡುಗಿಯನ್ನು ಟೆರೇಸ್ ಮೇಲಿಂದ ತಳ್ಳಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಯುವಕರಿಬ್ಬರು ತನ್ನ ತಂದೆ ಮತ್ತು ಜಾತಿಯನ್ನು ಟೀಕಿಸಿದ್ದಕ್ಕೆ ಕೋಪಗೊಂಡ ಹುಡುಗಿ ಯುವಕರ ಜೊತೆ ಜಗಳಕ್ಕೀಳಿದಿದ್ದಾಳೆ. ಆ ವೇಳೆ ಕೆರಳಿದ ಯುವಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ. ಇದನ್ನು ಹುಡುಗಿ ವಿರೋಧಿಸಿದ್ದಾಳೆ. ಆ ವೇಳೆ ಆಕೆಯ ತಂದೆ ಬರುತ್ತಿರುವುದನ್ನು ನೋಡಿದ ಯುವಕರು ಹುಡುಗಿಯನ್ನು ಟೆರೇಸ್ ಮೇಲಿಂದ ತಳ್ಳಿದ್ದಾರೆ.