ನಾಳೆಯಿಂದ ಆರಂಭವಾಗಲಿರುವ ಅಮರನಾಥ್ ಯಾತ್ರೆಗಾಗಿ ಬಿಗಿ ಭದ್ರತೆ ಏರ್ಪಡಿಸಿರುವ 100 ಪೊಲೀಸರು ಮತ್ತು ನೂರಾರು ಯಾತ್ರಿಗಳನ್ನು ಹತ್ಯೆಗೈಯುವ ಸಂಚು ಉಗ್ರರು ರೂಪಿಸಿದ್ದರಿಂದ ಮತ್ತಷ್ಟು ಕಟ್ಟೆಚ್ಚರ ವಹಿಸಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಅಮರನಾಥ್ ಯಾತ್ರೆಗೆ ತೆರಳುತ್ತಿರುವ 100 ರಿಂದ 150 ಯಾತ್ರಿಕರು ಮತ್ತು 100 ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈಯುವಂತೆ ಉಗ್ರರಿಗೆ ನಿರ್ದೇಶನ ನೀಡಲಾಗಿದೆ ಎಂದು ಅನಂತ್ನಾಗ್ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಪ್ತ ಮಾಹಿತಿಯನ್ನು ಗುಪ್ತಚರ ಅಧಿಕಾರಿಗಳಿಗೆ ತಿಳಿಸಿದ್ದಾರೆ.