ನವದೆಹಲಿ : ವಿಶ್ವದೆಲ್ಲೆಡೆ ಕೊರೊನಾ ಭೀತಿ ಹೆಚ್ಚಾಗಿದ್ದು, ಈ ನಡುವೆ ಕೊರೊನಾದಿಂದ ರಕ್ಷಿಸಿಕೊಳ್ಳಲು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೇ ಸಲಹೆ ನೀಡಿದ್ದಾರೆ. ಪ್ರಖರ ಬಿಸಿಲಿನಲ್ಲಿ 10-15 ನಿಮಿಷ ಮೈಯೊಡ್ಡಿದರೆ ಕೊರೊನಾ ವೈರಸ್ ಅನ್ನು ಅಸುನೀಗಿಸಬಹುದು. ಸೂರ್ಯನ ಕಿರಣದಿಂದ ವಿಟಮಿನ್ ಡಿ ಪಡೆಯಬಹುದು. ಈ ಪೋಷಕಾಂಶವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ