ಕೊರೊನಾ ಲಸಿಕೆಯ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವರು

ಬೆಂಗಳೂರು| pavithra| Last Modified ಶನಿವಾರ, 9 ಜನವರಿ 2021 (12:57 IST)
ಬೆಂಗಳೂರು : ರಾಜ್ಯಕ್ಕೆ ಮೊದಲ ಹಂತದಲ್ಲಿ 13.90 ಲಕ್ಷ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿ ಸಂವಾದ ನಡೆಸಲಾಗಿದೆ. ಎಲ್ಲ ಆರೋಗ್ಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಸಂವಾದ ನಡೆಸಲಾಗಿದೆ. ಸೋಮವಾರ ಸಂಜೆ ಸಿಎಂಗಳ ಜತೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಆ ವೇಳೆ ಲಸಿಕೆ ಹಂಚಿಕೆ ವಿಚಾರವಾಗಿ ಪ್ರಧಾನಿ ಮಾತನಾಡುತ್ತಾರೆ. ಆದಷ್ಟು ಶೀಘ್ರದಲ್ಲೇ ಕೊರೊನಾ ಲಸಿಕೆ ಬರಲಿದೆ. ವಿಡಿಯೋ ಸಂವಾದದಲ್ಲೇ ಲಸಿಕೆ ವಿತರಣೆಗೆ ಒಪ್ಪಿಗೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಲಸಿಕೆ ವಿತರಣೆ ಉದ್ಘಾಟನೆಗೆ 2 ಆಸ್ಪತ್ರೆ ಆಯ್ಕೆ ಮಾಡಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆ ಉದ್ಘಾಟನೆ ಮಾಡಲಾಗುವುದು. ಸರಿಯಾದ ಸಮಯಕ್ಕೆ ಲಸಿಕೆ ಬರಲಿದೆ. ಕೊರೊನಾ ಲಸಿಕೆ ವಿಳಂಬವಾಗುವ ಬಗ್ಗೆ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ವ್ಯಾಕ್ಸಿನ್ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :