ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವಸೆಗಿದ ಅಪ್ರಾಪ್ತ ಯುವಕ ಅರೆಸ್ಟ್

ಪಾಟ್ನಾ| Krishnaveni K| Last Modified ಶುಕ್ರವಾರ, 14 ಜನವರಿ 2022 (09:42 IST)
ಪಾಟ್ನಾ: ನಾಲ್ಕು ವರ್ಷದ ಪುಟಾಣಿ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ 17 ವರ್ಷದ ಅಪ್ರಾಪ್ತ ಯುವಕನನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಗುವಿಗೆ ಚಾಕಲೇಟಿನ ಆಮಿಷ ತೋರಿಸಿ ತನ್ನ ಮನೆಯ ಹಿತ್ತಲ ಭಾಗಕ್ಕೆ ಕರೆದೊಯ್ದಿದ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಮನೆಗೆ ಬಂದ ಬಾಲಕಿ ತಾಯಿಗೆ ಎಲ್ಲಾ ವಿಚಾರವನ್ನು ಹೇಳಿದ್ದಳು.


ಆಕೆಯನ್ನು ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅದರಂತೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :