ಹೈದರಾಬಾದ್: 13 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುವ ಯತ್ನ ಆಂಧ್ರದಲ್ಲಿ ನಡೆದಿದೆ.8 ತಿಂಗಳಿಂದ ಬಾಲಕಿ ಮೇಲೆ ಸುಮಾರು 80 ಮಂದಿ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿ ಸೇರಿದಂತೆ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಾಲಕಿಯ ತಾಯಿ ಕೊವಿಡ್ ನಿಂದಾಗಿ ತೀರಿಕೊಂಡಿದ್ದರು. ಅದಾದ ಬಳಿಕ ಆಸ್ಪತ್ರೆಯಲ್ಲೇ ಬಾಲಕಿಯ ಪರಿಚಯ ಮಾಡಿಕೊಂಡಿದ್ದ ಮಹಿಳೆಯೊಬ್ಬರು ತಂದೆಗೂ ತಿಳಿಸದೇ ಕರೆದುಕೊಂಡು ಹೋಗಿದ್ದರು. ಹೀಗಾಗಿ ತಂದೆ ಬಾಲಕಿ ನಾಪತ್ತೆಯಾದ ಬಗ್ಗೆ ದೂರು