ಬಹಿರ್ದೆಸೆಗೆ ಹೋಗಿದ್ದ ಬಾಲಕಿಯ ಎಳೆದೊಯ್ದು ಅತ್ಯಾಚಾರ

ಲಕ್ನೋ| Krishnaveni K| Last Modified ಬುಧವಾರ, 24 ನವೆಂಬರ್ 2021 (09:15 IST)
ಲಕ್ನೋ: ಬಹಿರ್ದೆಸೆಗೆ ಮನೆಯಿಂದ ಹೊರಗೆ ಹೋಗಿದ್ದ 13 ವರ್ಷದ ಅಪ್ರಾಪ್ತೆಯ ಮೇಲೆ ಇಬ್ಬರು ಕಾಮುಕರು ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸೋಮವಾರ ಸಂಜೆ ಬಹಿರ್ದೆಸೆಗೆಂದು ಅಪ್ರಾಪ್ತೆ ಮನೆಯಿಂದ ಹೊರಗೆ ಬಂದಿದ್ದಳು. ಈ ವೇಳೆ ಪಕ್ಕದ ಗ್ರಾಮದ ಇಬ್ಬರು ಯುವಕರು ಆಕೆಯನ್ನು ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾರೆ.


ಈ ಸಂಬಂಧ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :