ಪುಣೆ: 11 ವರ್ಷದ ಬಾಲಕಿ ಮೇಲೆ ಶಾಲಾ ಆವರಣದಲ್ಲೇ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಶಾಲೆಗೆ ಪ್ರತಿನಿತ್ಯ ಕೊಂಚ ಬೇಗನೇ ಬರುತ್ತಿದ್ದ ಬಾಲಕಿಯನ್ನು ದುಷ್ಕರ್ಮಿ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದ. ತನ್ನ ಮೇಲಾದ ಅತ್ಯಾಚರದ ಬಗ್ಗೆ ಬಾಲಕಿ ಸ್ನೇಹಿತರಿಗೆ ಹೇಳಿದ್ದರು. ಅವರು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು.ಬಳಿಕ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿ ಪೊಲೀಸರು ಇಬ್ಬರನ್ನು