ರಾಜಸ್ಥಾನ್: ಆನ್ ಲೈನ್ ಗೇಮ್ ಗಳ ರಿಚಾರ್ಜ್ ವಿಚಾರದಲ್ಲಿ 12 ವರ್ಷದ ಸಹೋದರ ಸಂಬಂಧಿಯೊಂದಿಗೆ ಕಿತ್ತಾಡಿಕೊಂಡ 16 ರ ಬಾಲಕ ಕೊನೆಗೆ ಆತನನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.12 ವರ್ಷದ ಸಹೋದರ ಸಂಬಂಧಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಮೃತದೇಹವನ್ನು ಪಕ್ಕದ ಹೊಲದಲ್ಲಿ ಹೂತಿದ್ದಾನೆ. ಮಗ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದರು.ಆತನ ಆನ್ ಲೈನ್ ಗೇಮ್ ಚಟಗಳ ಬಗ್ಗೆ ತಿಳಿದುಕೊಂಡ ಪೊಲೀಸರು ಆರೋಪಿ ಬಾಲಕನನ್ನು ವಿಚಾರಣೆಗೊಳಪಡಿಸಿದ್ದರು.