ನವದೆಹಲಿ : ರಷ್ಯಾ-ಉಕ್ರೇನ್ ಯುದ್ಧದ ನಡುವೆಯೂ ರಷ್ಯಾ ಭಾರತಕ್ಕೆ ಮಿಲಿಟರಿ ಸರಬರಾಜು ನೀಡುವುದನ್ನು ಮುಂದುವರಿಸಿದೆ.ಈಗಾಗಲೇ ಭಾರತ ಮಾಸ್ಕೋದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.ಯುದ್ಧದ ನಡುವೆಯೂ ರಷ್ಯಾ ಭಾರತಕ್ಕೆ ಮಿಲಿಟರಿ ಸರಬರಾಜುಗಳನ್ನು ಕಳುಹಿಸುತ್ತಿದೆ. ಇಲ್ಲಿವರೆಗೆ ರಷ್ಯಾ ಯಾವುದೇ ವಸ್ತುಗಳ ರವಾನೆಯಲ್ಲಿ ವಿಳಂಬ ಮಾಡಿಲ್ಲ.ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಹಡಗಿನ ಮೂಲಕ ಭಾರತಕ್ಕೆ ಕಳುಹಿಸಿದೆ. ಕ್ಷಿಪಣಿ ವ್ಯವಸ್ಥೆಯ ಇತರ ಭಾಗಗಳು ವಿಮಾನ ಹಾಗೂ ಸಮುದ್ರ ಮಾರ್ಗಗಳ ಮೂಲಕ ಆಗಮಿಸಿವೆ