ಹೈದರಾಬಾದ್ : ಅನಕಾಪಲ್ಲಿಯ DIET ಎಂಜಿನಿಯರಿಂಗ್ ಕಾಲೇಜಿನ ಏಳು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಪುಡಿಮಡಕ ಬೀಚ್ನಲ್ಲಿ ನಾಪತ್ತೆಯಾಗಿದ್ದಾರೆ.ಶುಕ್ರವಾರ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದು, ಅವರಲ್ಲಿ ಪವನ್ ಕುಮಾರ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದು, ಮತ್ತೋರ್ವ ತೇಜ ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನಾನ ಮಾಡಲೆಂದು ಏಳು ಮಂದಿ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಜೋರಾಗಿ ಬಂದ ಅಲೆ ಅವರನ್ನು ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.