ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೋಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಕಾಮುಕರ ಜೊತೆಗೆ ಜವಾಬ್ದಾರಿಯುತ ಶಾಸಕನೊ ಕೂಡ ಸಿಕ್ಕಿಬಿದ್ದಿದ್ದಾನೆ. ಶಾಸಕ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ ಪೋಲೀಸರ ತಂಡ ವೇಶ್ಯಾವಾಟಿಕೆ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ನೆನ್ನೆ ತಡರಾತ್ರಿಯಲ್ಲಿ ಡ್ಯಾನ್ಸ್ ಬಾರ್ ಮೇಲೆ ಧಾಳಿ ನಡೆಸಿದ ಪೋಲೀಸರು ಆರು ಹುಡುಗಿಯರನ್ನು ಬಂಧಿಸಿದ್ದಾರೆ. ಈ ಹುಡುಗಿಯರ ಜೊತೆಯಲ್ಲಿ ಮಣಿಪುರದ ಶಾಸಕನನ್ನು ಕೂಡ ಬಂಧಿಸಲಾಗಿದೆ ಎಂದು ಪೋಲೀಸ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ