ತಮ್ಮ ಪಕ್ಷದ ಗೆಲುವಿಗೆ ಕಾಂಗ್ರೆಸ್ಸಿನ ದುರಾಡಳಿತವೇ ಕಾರಣ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯ ಗೆಲುವಿನ ಶ್ರೇಯವನ್ನು ತಮ್ಮ ಶಿಷ್ಯ ಮೋದಿಗೆ ನೀಡಲು ಸುತಾರಾಂ ತಯಾರಿಲ್ಲ. ತಮ್ಮ ರಾಜಕೀಯ ಗುರು ಅಡ್ವಾಣಿಕೆಗೆ ತಕ್ಕ ಉತ್ತರ ನೀಡಿರುವ ಮೋದಿ, ಈ ಮತದಾನ ಸರಕಾರದ ವಿರುದ್ಧ ಎಂದು ಕೆಲವು ಜನರು ಹೇಳುತ್ತಿದ್ದಾರೆ. ಆದರೆ ಸರಕಾರ ಎಲ್ಲಿತ್ತು? ಸರಕಾರದ ಅಸ್ತಿತ್ವವೇ ಇರಲಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಶೂನ್ಯತೆ ವ್ಯಾಪ್ತವಾಗಿತ್ತು.