ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರಕ್ಕೂ ಹಿಂದಿದ್ದ ಯುಪಿಎ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆರೆಸ್ಸೆಸ್ ಭಾರತೀಯ ಮಜ್ದೂರ ಸಂಘದ ಅಧ್ಯಕ್ಷ ಸಜ ನಾರಾಯಣ್ ಹೇಳಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರಕಾರದ ಆರ್ಥಿಕ ನಿಲುವುಗಳು ದೇಶಕ್ಕೆ ಮಾರಕವಾಗಿವೆ. ಬಡವರ ಮೇಲೆ ತೆರಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಡವರು ಜೀವನ ಮಾಡುವುದು ಕಷ್ಟವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಆರ್ಥಿಕತೆ, ಕಾರ್ಮಿಕರ ವಿಷಯಗಳಲ್ಲಿ ಮೋದಿ ಸರಕಾರಕ್ಕೂ ಯುಪಿಎ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಒಂದೇ ಆರ್ಥಿಕ