ನವದೆಹಲಿ : ಆಸ್ಟ್ರೇಲಿಯಾದಿಂದ ಇಂದು ಭಾರತಕ್ಕೆ ಮರಳಿದ 9-10ನೇ ಶತಮಾನದ ಹಿಂದಿನ 29 ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದರು.ಐತಿಹಾಸಿಕ ಹಿನ್ನೆಲೆಯಿರುವ 29 ಪುರಾತನ ವಸ್ತುಗಳನ್ನು ಇಂದು ಆಸ್ಟ್ರೇಲಿಯಾ ಭಾರತಕ್ಕೆ ವಾಪಸ್ ಕಳುಹಿಸಿದೆ. ಈ ಪುರಾತನ ವಸ್ತುಗಳಲ್ಲಿ ಶಿವ ಹಾಗೂ ಅವನ ಶಿಷ್ಯರು, ಭಗವಾನ್ ವಿಷ್ಣು ಮತ್ತು ಅವನ ರೂಪಗಳ ಮೂರ್ತಿ ಜೈನ ಸಂಪ್ರದಾಯ, ಭಾವಚಿತ್ರಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಹೊಂದಿವೆ.ಪುರಾತನ ವಸ್ತುಗಳು 9-10ನೇ ಶತಮಾನದ ಹಿಂದಿನಿದ್ದಾಗಿದೆ.