ಲಖನೌ : ಲಖಿಂಪುರ-ಖೇರಿಯಲ್ಲಿ ಕೇಂದ್ರ ಸಚಿವರ ಕಾರು ಹರಿಸಿ, ರೈತರ ಹತ್ಯೆಯ ಪರಿಣಾಮವು ಚುನಾವಣೆಯ ಮೇಲೆ ಆಗುವುದನ್ನು ತಡೆಯಲು ಮೋದಿ ಅವರು ಪ್ರಯತ್ನಿಸಿದ್ಧಾರೆ. ರೈತರಿಗಾಗಿ ಸರ್ಕಾರ ಏನೇನು ಮಾಡಿದೆ ಎಂಬ ಪಟ್ಟಿಯನ್ನು ಜನರ ಮುಂದೆ ಇಟ್ಟಿದ್ದಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಉತ್ಪನ್ನಗಳನ್ನು ಖರೀದಿಸುವಲ್ಲಿ ದಾಖಲೆ ನಿರ್ಮಿಸಿವೆ. ಕೃಷಿ ಉತ್ಪನ್ನಗಳ ಖರೀದಿ ಮೂಲಕ ಎರಡೂ ಸರ್ಕಾರಗಳು ಉತ್ತರ ಪ್ರದೇಶದ ರೈತರ ಖಾತೆಗಳಿಗೆ ಒಟ್ಟು ₹80,000 ಕೋಟಿ ಹಣ ವರ್ಗಾವಣೆ