ಮೋದಿ ಸರ್ಕಾರಕ್ಕೆ ಸುಪ್ರೀಂಕೋರ್ಟಿನಿಂದ ಕಪಾಳ ಮೋಕ್ಷ !

ನವದೆಹಲಿ, ಬುಧವಾರ, 10 ಏಪ್ರಿಲ್ 2019 (18:23 IST)

ರಫೇಲ್ ಕುರಿತು ಸುಪ್ರೀಂಕೋರ್ಟ್ ತನ್ನ ನಿರ್ಧಾರ ತಿಳಿಸಿದ್ದು, ಕೇಂದ್ರ ಸರ್ಕಾರವು ಸಲ್ಲಿಸಿದ್ದ ಎಲ್ಲಾ ಆಕ್ಷೇಪಣೆಗಳನ್ನೂ ಸರ್ವಾನುಮತದಿಂದ ತಳ್ಳಿಹಾಕಿದೆ. ಇದರಿಂದ ಮೋದಿ ಸರಕಾರಕ್ಕೆ ಭಾರೀ ಮುಖಭಂಗವಾದಂತಾಗಿದೆ.
 
"ಹಿಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನೂ ಒಳಗೊಂಡಂತೆ ಇಲ್ಲಿಯವರೆಗೆ ಪ್ರಕಟವಾದ ಎಲ್ಲಾ ದಾಖಲೆಗಳನ್ನೂ ರಫೇಲ್ ಒಪ್ಪಂದದ ಪ್ರಕರಣದಲ್ಲಿ ಪರಿಶೀಲಿಸಲಾಗುವುದು" ಎಂದು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ತಿಳಿಸಿದ್ದಾರೆ.  
 
ಹಿಂದು ಪತ್ರಿಕೆಯು ರಫೇಲ್ ಒಪ್ಪಂದ ಕುರಿತ ವರದಿಗಳನ್ನು ಪ್ರಕಟಿಸುವ ಮೂಲಕ 'ಪಿತೂರಿ' ನಡೆಸುತ್ತಿದೆ ಎಂಬ ವಾದವನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತು.
 
ರಕ್ಷಣಾ ಇಲಾಖೆಯ ದಾಖಲೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ರಾಷ್ಟ್ರದ ಭದ್ರತೆ ಅಪಾಯದಲ್ಲಿದೆ ಮತ್ತು ಆ ದಾಖಲೆಗಳ ಸೋರಿಕೆಯು 'ಅಧಿಕೃತ ಗೋಪ್ಯತೆ ಕಾಯಿದೆ'ಯ ಪ್ರಕಾರ ಅಪರಾಧವಾಗುತ್ತದೆ ಎಂದೂ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. 
 
ಮುಂದಿನ ವಿಚಾರಣೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾತ್ರೋರಾತ್ರಿ 7 ಬೈಕ್ ಸುಟ್ಟಿದ್ದು ಹೇಗೆ?

ತಡರಾತ್ರಿ ಸಂಭವಿಸಿದ ಬೆಂಕಿ ಅವಘಡಕ್ಕೆ ಬೈಕ್ ಮಾಲೀಕರು ನಲುಗಿದ್ದರೆ, ಸೈಕಲ್ ಸವಾರರು ಆತಂಕಗೊಂಡಿದ್ದಾರೆ.

news

ಸುಮಲತಾಗೆ ವೋಟ್ ಹಾಕಲ್ಲ ಎಂದ ಅಂಬರೀಶ್ ಅಭಿಮಾನಿ. ಕಾರಣವೇನು ಗೊತ್ತಾ?

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೀಳಿಯುತ್ತಿರುವ ಸುಮಲತಾಗೆ ಯಾವುದೇ ...

news

ಮತದಾನ ಮಾಡದೆ ಔಟಿಂಗ್ ಹೋಗುವವವರಿಗೆ ಶಾಕ್ ಕೊಟ್ಟ ಐಟಿ ಕಂಪನಿಗಳು

ಬೆಂಗಳೂರು : ಲೋಕಸಭಾ ಚುನಾವಣೆ ದಿನ ಮತದಾನ ಮಾಡದೆ ಔಟಿಂಗ್ ಹೋಗುವವವರಿಗೆ ಐಟಿ ಕಂಪನಿಗಳು ಭರ್ಜರಿ ಶಾಕ್ ...