ಪ್ರತಿಭಟನೆ ಹಿಂಪಡೆಯಿರಿ ಮಾತುಕತೆಗೆ ಬನ್ನಿ- ರೈತರಿಗೆ ಪ್ರಧಾನಿ ಮೋದಿ ಆಹ್ವಾನ

ನವದೆಹಲಿ| pavithra| Last Modified ಸೋಮವಾರ, 8 ಫೆಬ್ರವರಿ 2021 (12:18 IST)
ನವದೆಹಲಿ : ಪ್ರತಿಭಟನೆ ಹಿಂಪಡೆಯಿರಿ ಮಾತುಕತೆಗೆ ಬನ್ನಿ ಎಂದು ಪ್ರತಿಭಟನಾ ರೈತರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಪ್ರತಿಭಟನೆ ನಡೆಸುವುದು ನಿಮ್ಮ ಹಕ್ಕು. ಧರಣಿ ಹಿಂತೆಗೆದುಕೊಳ್ಳಿ, ಮಾತುಕತೆಗೆ ಬನ್ನಿ. ನಾವು ಮಾತುಕತೆಗೆ ಸಿದ್ಧವಿದ್ದೇವೆ ಎಂದು ರೈತರಿಗೆ ಕರೆ ನೀಡಿದ್ದಾರೆ.  

ಕೃಷಿಯನ್ನು ಸಮೃದ್ಧಗೊಳಿಸಲು ಇದು ಸೂಕ್ತ ಕಾಲ. ಈ ಕಾಲ ಹೋದರೆ ಮತ್ತೆ ಸಿಗುವುದಿಲ್ಲ. ಕೆಟ್ಟದ್ದು ನನ್ನ ಖಾತೆಗೆ ಇರಲಿ, ಒಳ್ಳೆಯದರ ಶ್ರೇಯಸ್ಸನ್ನು ನೀವೆಲ್ಲರೂ ಸೇರಿ ಹಂಚಿಕೊಳ್ಳಿ ಎಂದು ಅವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :