ಗಾಂಧಿನಗರ|
Jaya|
Last Modified ಶುಕ್ರವಾರ, 16 ಮೇ 2014 (11:35 IST)
ದೇಶದಲ್ಲಿ ಮೋದಿ ಅಲೆ ಎಲ್ಲಿಯೂ ಇಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದ ವಿರೋಧಿಗಳಿಗೆ ನರೇಂದ್ರ ಮೋದಿಯವರು ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಸತತ 15 ವರ್ಷಗಳಿಂದ ಗುಜರಾತ್ನಲ್ಲಿ ಆಡಳಿತ ನಡೆಸುತ್ತಿರುವ ಮೋದಿ, ತನ್ನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡಸಹಿತ ಕಿತ್ತೊಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ವಡೋದರಾದಲ್ಲಿ ಮೋದಿ ಗೆಲುವನ್ನು ದಾಖಲಿಸಿದ್ದು, ರಾಜ್ಯದ ಇತರ ಎಲ್ಲಾ 25 ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷವು ಭಾರಿ ಮುನ್ನಡೆಯನ್ನು ಸಾಧಿಸುತ್ತಿದ್ದರೆ, ವಿರೋಧ ಪಕ್ಷದ ಪ್ರತಿಸ್ಪರ್ಧಿಗಳಲ್ಲಿ ಹೆಚ್ಚಿನವರು ಠೇವಣಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ದೇಶದಾದ್ಯಂತ ನಿಚ್ಚಳ ಬಹುಮತ ಪಡೆಯಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಹಿಂದಿನ ಯಾವುದೇ ಚುನಾವಣೆಗಳಲ್ಲಿಯೂ ದಕ್ಕದ ಜನತಾ ತೀರ್ಪು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಮೋದಿಯನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದ ಹಲವಾರು ನಾಯಕರು ಮುಖ್ಯವಾಹಿನಿಗೆ ಇನ್ನೂ ತಮ್ಮ ಮುಖ ದರ್ಶನವನ್ನೇ ತೋರಿಸಿಲ್ಲ. ಹಲವಾರು ಘಟಾನುಘಟಿ ನಾಯಕರು ಮೋದಿ ಅಲೆಯಲ್ಲಿ ಕೊಚ್ಚಿ ಹೋಗುವ ದಟ್ಟ ಕಾರ್ಮೋಡಗಳು ವಿರೋಧಿಗಳ ಮೇಲೆ ಆವರಿಸಿವೆ. ಸ್ವತಃ ಕಾಂಗ್ರೆಸ್ ಪಕ್ಷದ ಯುವರಾಜರೇ (ರಾಹುಲ್ ಗಾಂಧಿ) ಸೋಲಿನ ಭೀತಿ ಎದುರಿಸುತ್ತಿದ್ದಾರೆ. ಏನೇ ಆದರೂ ದೇಶದಾದ್ಯಂತ ಮೋದಿ ಅಲೆಯಿದೆ ಎಂಬುದು ಜನತಾ ತೀರ್ಪಿನಲ್ಲಿ ನಿಕ್ಕಿಯಾಗಿದೆ.
ಕಟುಟೀಕೆಗಳನ್ನಾಡಿದ್ದ ವಿರೋಧಿಗಳು ಮುಂದೆ ಯಾವ ಹೇಳಿಕೆಯನ್ನು ನೀಡುತ್ತಾರೆಂಬುದೇ ಸದ್ಯ ಮುಂದಿರುವ ಪ್ರಶ್ನೆ.
ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲ್ಲಿಗೆ ಭೇಟಿ ಕೊಡಿ
LIVE Karnataka Lok Sabha 2014 Election Results
//elections.webdunia.com/karnataka-loksabha-election-results-2014.htm
LIVE Lok Sabha 2014 Election Results