ಮೋದಿ ಪತ್ನಿ ಜಶೋಧಾ ಬೆನ್ ಮಹಾನ್ ಮಹಿಳೆ : ಶೋಭಾ ಓಝಾ

ವಡೋದರಾ| Jaya| Last Modified ಶನಿವಾರ, 26 ಏಪ್ರಿಲ್ 2014 (11:33 IST)
ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ "ಮೋದಿ ಪತ್ನಿ ಜಶೋಧಾ ಬೆನ್ ಒಬ್ಬ ಮಹಾನ್ ಮಹಿಳೆ, ಅವರನ್ನು ಗೌರವಿಸಬೇಕು" ಎಂದು ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷ ಶೋಭಾ ಓಝಾ ಹೇಳಿದ್ದಾರೆ.
ಮೋದಿ ಕಣಕ್ಕಿಳಿದಿರುವ ಎರಡು ಕ್ಷೇತ್ರಗಳಲ್ಲಿ ಒಂದಾದ ವಡೋದರಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ, ಪಕ್ಷದ ರಾಷ್ಟ್ರೀಯ ಮಹಾಸಚಿವರಾಗಿರುವ ಮಧುಸೂದನ ಮಿಸ್ತ್ರಿ ಪರ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಪತ್ರಕಾರರ ಜತೆ ಮಾತನಾಡುತ್ತಿದ್ದ ಓಝಾ "ಶ್ರೀಮತಿ ಜಶೋಧಾ ಬೆನ್ ಒಬ್ಬ ಮಹಾನ್ ಮಹಿಳೆ. ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಬೇಕು. ಎಷ್ಟೆಲ್ಲಾ ನೋವು ಅನುಭವಿಸಿದರೂ ಕೂಡ ಆಕೆ ಮೋದಿ ವಿರುದ್ಧ ಒಂದೇ ಒಂದು ಶಬ್ಧವನ್ನು ಆಡಿಲ್ಲ. ಅಲ್ಲದೇ ಆಕೆ ತನ್ನ ಕಾಲ ಮೇಲೆ ತಾನು ನಿಂತಿದ್ದಾರೆ" ಎಂದು ಹೇಳಿದರು.
ಮೋದಿಯವರನ್ನು 'ಸುಳ್ಳುಗಾರ' ಎಂದ ಓಝಾ, "ಅವರು ಕಡಿಮೆ ಎಂದರೆ 4 ಬಾರಿ ತಮ್ಮ ವಿವಾಹದ ವಿಷಯದಲ್ಲಿ ಸುಳ್ಳು ಹೇಳಿದ್ದಾರೆ. 2001 ರಿಂದ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಪತ್ನಿಯ ಕಾಲ್ಂ ‌ನ್ನು ಖಾಲಿ ಬಿಟ್ಟಿದ್ದಾರೆ" ಎಂದು

ಆರೋಪಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :