ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ವಡೋದರಾದಲ್ಲಿ 5 ಲಕ್ಷ ಮತಗಳಂತರದಿಂದ ಗೆಲ್ಲಲಿದ್ದಾರೆ ಎಂದು ಗುಜರಾತ್ ಇಂಧನ ಖಾತೆ ಸಚಿವ ಸೌರಭ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ. ವಡೋದರದಲ್ಲಿ ಬಹುಸಂಖ್ಯೆಯ ಮತ ಸಿಗುವ ಭರವಸೆ ಇದೆ. ಅವರ ಗೆಲುವಿನ ಅಂತರ 5 ಲಕ್ಷಕ್ಕಿಂತ ಹೆಚ್ಚಿರಲಿದೆ ಎಂದು ಕ್ಷೇತ್ರದಲ್ಲಿ ಮೋದಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಪಟೇಲ್ ಹೇಳಿದ್ದಾರೆ. ಅಕೋಟಾದಿಂದ ವಿಧಾನಸಭೆಯನ್ನು ಪ್ರತಿನಿಧಿಸುತ್ತಿರುವ ಅವರು, ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ದಿನದಿಂದ ವಡೋದರಾದಲ್ಲಿ ಬೀಡು